Quantcast
Channel: Entertainment – KannadaDunia.com
Viewing all articles
Browse latest Browse all 14653

ಗಾಂಜಾದಿಂದ ಯಾರೂ ಸತ್ತಿಲ್ಲ, ಅದೊಂದು ತುಳಸಿಯಂತಹ ಪವಿತ್ರ ಗಿಡ ಎಂದ ನಟಿ ನಿವೇದಿತಾ ವಿರುದ್ಧ FIR

$
0
0

ಬೆಂಗಳೂರು: ಗಾಂಜಾದಿಂದ ಒಂದು ಸಾವು ಆಗಿಲ್ಲ. ಗಾಂಜಾದಿಂದ ಯಾರೂ ಸತ್ತಿಲ್ಲ. ಗಾಂಜಾ ನಮ್ಮ ತುಳಸಿಯಂತಹ ಪವಿತ್ರ ಗಿಡ ಎಂದು ಹೇಳಿಕೆ ನೀಡಿದ್ದ ನಟಿ ನಿವೇದಿತಾ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಮಲ್ಲೇಶ್ವರಂ ನಿವಾಸಿ ದೀಪಕ್ ಅವರು ನೀಡಿದ ದೂರಿನ ಮೇರೆಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ನಿವೇದಿತಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಗಾಂಜಾದಿಂದ ಯಾರು ಸಾವನ್ನಪ್ಪಿಲ್ಲ ಅದೊಂದು ತುಳಸಿ ಗಿಡದಷ್ಟೇ ಪವಿತ್ರವಾದುದು ಎಂದು ಹೇಳುವ ಮೂಲಕ ನಿವೇದಿತಾ ಮಾದಕ ವಸ್ತು ಸೇವನೆಗೆ ಉತ್ತೇಜನ ನೀಡಿದ್ದಾರೆ. ಅವರ ಹೇಳಿಕೆ ಯುವಕರನ್ನು ದಾರಿ ತಪ್ಪಿಸುವಂತಿದೆ. ಹಿಂದುಗಳ ಪವಿತ್ರ ತುಳಸಿಯನ್ನು ಗಾಂಜಾ ಗಿಡಕ್ಕೆ ಹೋಲಿಸಿ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ದೂರಲಾಗಿದ್ದು ನಿವೇದಿತಾ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.


Viewing all articles
Browse latest Browse all 14653

Latest Images

Trending Articles



Latest Images

<script src="https://jsc.adskeeper.com/r/s/rssing.com.1596347.js" async> </script>